ಶುಕ್ರವಾರ, ಜೂನ್ 1, 2012
ಗುರುವಾರ, ಏಪ್ರಿಲ್ 19, 2012
ಸುಪಾರ್ಶ್ವ ಗುಹೆ
ಸುಪಾರ್ಶ್ವ ಗುಹೆ
:ಕಮಲಶಿಲೆ ಇಂದ ಹಳ್ಳಿಹೊಳೆ ಮಾರ್ಗದಲ್ಲಿ 1 .5 ಕೀ .ಮೀ .ದೂರದ ದಟ್ಟ ಕಾನನದ ಮಧ್ಯೆ ದಲ್ಲಿ
ಕಂಡುಬರುತ್ತದೆ .ಕ್ರತ ಯುಗದಲ್ಲಿ ,ಸುಪಾರ್ಶ್ವ ನೆಂಬ ರಾಜನು ರಾಜಕೀಯದಲ್ಲಿ ಜಿಗುಪ್ಸೆ
ಹೊಂದಿ ತಪಸ್ಸಿಗೆ ಯೋಗ್ಯ ಸ್ಥಳವನ್ನು ಹುಡುಕುತ್ತಿರುವ ಸಂದರ್ಭ ,ಶಿವನ ಅಣತೆಯಂತೆ,ಇಲ್ಲಿ
ತಪಸ್ಸನ್ನು ಆಚರಿಸಲು ಸಿದ್ದನಾಗುತ್ತಾನೆ .ಅವನ ತಪಸ್ಸಿಗೆ ಯಾವುದೇ ವಿಘ್ನ
ಸಂಬವಿಸದಂತೆ ಶಿವನು ತನ್ನ ಬೈರನಿಗೆ ಗುಹ ದ್ವಾರದಲ್ಲಿ ನಿಲ್ಲುವಂತೆ ಸೂಚಿಸುತ್ತಾನೆ
.ಸುಪಾರ್ಶ್ವ ನು ಬಹುಕಾಲ ಗುಹೆಯಲ್ಲಿ ತಪಗೈದು ಮೋಕ್ಷ ಹೊಂದುತ್ತಾನೆ .ಇದರಿಂದ
ಸುಪಾರ್ಶ್ವ ಎಂದು ಹೆಸರು ಬಂದಿತು .ಗುಹೆಯ ಒಳಗೆ ವ್ಯಾಘ್ರಗುಹೆ ,ಕಾಳ,ಲಕ್ಷ್ಮಿ
,ಸರಸ್ವತಿ ,ಅಕ್ಕ -ತಂಗಿಯರ ಜೋಡು ಕೆರೆ ,ನಾಗನ ತೀರ್ಥ ,ನಾಗನ ಉದ್ಭವ ಮೂರ್ತಿ ಗಳನ್ನೂ
ಇಂದಿಗೂ ಸಹ ಗೋಚರಿಸುತ್ತವೆ .ರಥೋತ್ಸವದ ಮುನ್ನ ದಿನ ಹುಲಿ ಈ ಗುಹೆಯನ್ನು
ಪ್ರವೇಶಿಸುತ್ತದೆ .ಮತ್ತು ಸುತ್ತ -ಮುತ್ತಲಿನ ಪ್ರದೇಶ ಗಳಿಗೆ ಹೋಗಿ ಘರ್ಜಿಸುತ್ತದೆ ಇದು
ರಥೋತ್ಸವದ ಆಮಂತ್ರ ಣ, ಶ್ರೀ ದೇವಿ ಯು ತನ್ನ ವಾಹನವಾಗಿರುವ ಈ ಹುಲಿ ಯನ್ನು ಕಳುಶಿಸಿ
ಕೊಡುತಾಳೆ ಎನ್ನಲಾಗಿದೆ .ಇವತ್ತಿಗೂ ಸಹ ಹುಲಿಯ ಹೆಜ್ಜೆಯ ಗುರುತನ್ನು ಕುರುಹಾಗಿ
ಗುಹೆಯಲ್ಲಿ ಪತ್ತೆ ಹಚ್ಚಬಹುದು ..
ಶ್ರೀ ಕ್ಷೇತ್ರ ಕಮಲಶಿಲೆ
ಪುಟ್ಟ ಪರಿಚಯ : ಕುಂದಾಪುರ ದಿಂದ 35 ಕೀ.ಮೀ .ಪೂರ್ವ ದಿಕ್ಕಿಗೆ ,ಸಿದ್ದಾಪುರದಿಂದ 7
ಕೀ .ಮೀ .ದೂರವಿರುವ ಶ್ರೀ ಕ್ಷೇತ್ರ ಕಮಲಶಿಲೆ ಹಚ್ಚ -ಹಸುರಿನ ಪಚ್ಚಿಮ ಘಟ್ಟದ ತಪ್ಪಲಿನ ಮಧ್ಯೆ, ಪ್ರಶಾಂತವಾಗಿ ವರ್ಷವಿಡೀ ಹರಿಯುವ ಕುಬ್ಜಾ ನದಿ ತೀರದಲ್ಲಿನೆಲೆ ನಿಂತಿರುವ ಬ್ರಾಹ್ಮಿ ದುರ್ಗಾ ಪರಮೇಶ್ವರಿಯ ಇತಿಹಾಸ ಅಪಾರ ."ಕ್ರರಾಕ್ಷ " ರಾಕ್ಷಸನ್ನು ವಧಿಸಿ ಬ್ರಾಹ್ಮೀ ಎಂಬ ನಾಮಕಿಂತ ಗೊಂಡು, ಶ್ರೀ ದೇವಿ ಅಪಾರ ವತಾರದಿ0ದ ಭಕ್ತರ ಭಕ್ತರ ಇಷ್ಟಾರ್ತಕನುಗುಣ ವಾಗಿ ಬ್ರಾಹ್ಮಿ ದುರ್ಗಾ ಪರಮೇಶ್ವರಿ ಯಾಗಿ ರೂಪು ಗೊಂಡಿತು . ಶ್ರೀ ದೇವಿಯ ಉದ್ಭವ ಲಿಂಗ (ಮೂರ್ತಿ )ಯು ಕಮಲದ ಶಿಲೆ (ಕಲ್ಲು ) ರೀತಿಯನ್ನು ಹೊಂದಿರುದರಿಂದ ಈ ಪ್ರಾಂತ್ಯವನ್ನು ಕಮಲಶಿಲೆ ಎಂದು ಕರೆಯಲ್ಪಡುತ್ತಿದೆ .ಈ ಸ್ಥಳವು ಹಿಂದೆ ಮಹಾ ತಪಸ್ವಿ ಗಳಾದ "ರೈಕ್ವ" ಮುನಿಗಳ ಆಶ್ರಮವಾಗಿತ್ತು."ಗೌರಿ ಶಕ್ತಿ" ಇಂದ ಕೂಡಿದ ಶ್ರೀ ದುರ್ಗೆಯು ಪ್ರಚಂಡ ರಾಕ್ಷಸರುಗಳಾದ "ಖಾರಸುರ ".ರಟ್ಟಸುರ' ರನ್ನು ಸಂಹಾರ ಮಾಡಿ ಶಿವನಾಜ್ಞೆಯಂತೆ ಇಲ್ಲಿಯೇ ನೆಲೆ ನಿಂತಳು ಎನ್ನವುದು ಸ್ಕಂದ ಪುರಾಣದ ಉಲ್ಲೇಖವಾಗಿದೆ . .ಪ್ರತಿ ದಿನ ಇಲ್ಲಿ ಉಷಾ:ಕಾಲ,ಪ್ರಾತ:ಕಾಲ ,ಮಧ್ಯಾನ ,ಸಂದ್ಯಾಕಾಲ ,ರಾತ್ರಿ ,ಹೀಗೆ ಐದು ಪೂಜೆ ಗಳು ,ತ್ರಿಕಾಲ ಪೂಜೆಗಳು ನಡೆಯತ್ತದೆ .ಶ್ರೀ ಚಂಡಿಕಾಯಾಗ ,ಬೆಳ್ಳಿ ರಥೋತ್ಸವ ,ರಾತ್ರಿ ಮಹಾರಂಗ ಪೂಜೆ ,ಸರ್ವಭಾರಣ ಉತ್ಸವ ,ಪುಷ್ವ ರತೋತ್ಸವ ,ನಡೆಯತ್ತದೆ .ಶ್ರೀ ಕ್ಷೇತ್ರ ದ ವತಿ ಇಂದ ಯಕ್ಷಗಾನ ನಡೆಯುತ್ತಿದ್ದೂ .ಬೆಳಕಿನ ಸೇವೆ ಹರಕೆ ಹೊತ್ತ ಭಕ್ತ ಧಿಗಳು ತಮ್ಮ ಮನೆಗಳಲಿ ನೆರವೇರಿಸುತ್ತಾರೆ .ಭಕ್ತಾಧಿಗಳು ತಮ್ಮ ಮಾನಸಿಕ ,ದೈಹಿಕ, ವಯಕ್ತಿಕ ತೊಂದರೆ ಗಳಿ0ದ ಪಾರಾಗಲು ಶ್ರೀ ಕ್ಷೆತ್ರವನ್ನು ಅವಲಂಬಿಸುದರ ಜೊತೆಗೆ,ಜಾನುವಾರುಗಳಿಗೆ ರೋಗ -ರುಜಿನಿಗಳು ಬಂದಾಗ ಹರಕೆ ರೂಪದಲ್ಲಿ ಗೋವು ಗಳನ್ನೂ ಶ್ರೀ ದೇವಿಯ ಭಂಡಾರಕ್ಕೆ ಬಿಡುತ್ತಾರೆ ,ಇನ್ನು ಬಹಳಷ್ಟು ಹರಕೆ ರೂಪದ ಜಾನುವಾರುಗಳು ಭಕ್ತಾಧಿಗಳ ಮನೆಯಲ್ಲಿದ್ದೂ , ,ಕಾಲ- ಪೂಜಕ್ಕೆ ತಕ್ಕಂತೆ ಹಾಲು -ತುಪ್ಪವನ್ನು ತಂದೊಪ್ಪಿಸುತ್ತಾರೆ . ಸೀರೆ ,ಆಭರಣ ಗಳನ್ನೂ ತಂದೊಪ್ಪಿಸಿ ಶ್ರೀ ದೇವಿ ಯಾ ಕ್ರಪೆಗೆ ಪಾತ್ರರಾಗುತ್ತಾರೆ.
ಸೋಮವಾರ, ಮಾರ್ಚ್ 5, 2012
ಮೆಕ್ಕೆ ಕಟ್ಟೆಯಲ್ಲಿ ಜಪಾನಿನ ವಿಶಿಷ್ಟ ಸ್ವಾಗತ ಕಮಾನು
ಉಡುಪಿ -ಬಾರ್ಕೂರ್-ಶಿವಮೊಗ್ಗ ಕ್ಕೆ ತೆರಳುವ ರಾಜ್ಯ ಹೆದ್ದಾರಿಯ 'ಮೆಕ್ಕೆ ಕಟ್ಟೆ'ಯಲ್ಲಿ ನಂದಿಕೇಶ್ವರ ದೇವಸ್ಥಾನದ ಸ್ವಾಗತ ಕಮಾನು ಮತ್ತು ಅದರ ಸನಿಹವಿರುವ ಬಸ್ ನಿಲುಗಡೆ ತಾಣ ವಿಶಿಷ್ಟ ರೀತಿಯಲ್ಲಿ ಜನರ ಕಣ್ಮನ ಸೆಳೆಯುತ್ತಿದೆ . ಜಿಲ್ಲೆಯಾದ್ಯಂತ ಅನೇಕ ದೇವಸ್ಥಾನ .ದೈವಸ್ಥಾನಗಳಿಗೆ ಇರುವ ಸಾಂಪ್ರದಾಯಕ ಶಿಲ್ಪ ಶೈಲಿಯ ಸ್ವಾಗತ ಕಮಾನಿಗೂ,'ಮೆಕ್ಕೆಕಟ್ಟೆ 'ಯಲ್ಲಿರುವ ಕಮಾನಿಗೂ ವಿಬಿನ್ನತೆ ಇದ್ದೂ ,ಬುಡ 4 ಅಡಿ 1 ಇಂಚು ತ್ರಿಕೋಣ ಆಕ್ರುತಿಯಲ್ಲಿದೆ .ಮೇಲೆ ಹೋದಂತೆ ಅದು 12 ಇಂಚು ಅಳತೆಯಲ್ಲಿದೆ .ಎತ್ತರ 40 ಅಡಿ .10 ಅಡಿ ನೆಲದ ಒಳಗಡೆ ಇದ್ದೂ ,ಇದು 'ಟೋಕಿಯೋ ' ನಗರದ ಸ್ವಾಗತ ಕಮಾನು ಮತ್ತು ಅಲ್ಲಿನ ವಿನ್ಯಾಸದ ಬಸ್ ನಿಲುಗಡೆ ತಾಣವಾಗಿದೆ .1990 ಆಚಲಾಡಿ ಭುಜಂಗ ಶೆಟ್ಟಿ ಯವರು ಈ ಸ್ವಾಗತ ಕಮಾನನ್ನು ನಂದಿಕೇಶ್ವರ ದೇವಸ್ಥಾನಕ್ಕೆ ಸೇವಾರೂಪದಲ್ಲಿ ನೀಡಿದ್ದೂ ,ಇದರ ವಿನ್ಯಾಸ ಮತ್ತು ರಚನೆ ಭಾರತದ ತಂತ್ರಾಜ್ನನಿಗಳಿಗೆ ,ವಾಸ್ತು ವಿನ್ಯಾಸಗಾರರಿಗೆ ಸಂಶೋಧನಾತ್ಮ್ಕವಾಗಿದೆ..
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)


