ಸೋಮವಾರ, ಮಾರ್ಚ್ 5, 2012

ಮೆಕ್ಕೆ ಕಟ್ಟೆಯಲ್ಲಿ ಜಪಾನಿನ ವಿಶಿಷ್ಟ ಸ್ವಾಗತ ಕಮಾನು

ಉಡುಪಿ -ಬಾರ್ಕೂರ್-ಶಿವಮೊಗ್ಗ ಕ್ಕೆ ತೆರಳುವ ರಾಜ್ಯ ಹೆದ್ದಾರಿಯ 'ಮೆಕ್ಕೆ ಕಟ್ಟೆ'ಯಲ್ಲಿ ನಂದಿಕೇಶ್ವರ ದೇವಸ್ಥಾನದ ಸ್ವಾಗತ ಕಮಾನು ಮತ್ತು ಅದರ ಸನಿಹವಿರುವ  ಬಸ್ ನಿಲುಗಡೆ ತಾಣ ವಿಶಿಷ್ಟ ರೀತಿಯಲ್ಲಿ ಜನರ ಕಣ್ಮನ ಸೆಳೆಯುತ್ತಿದೆ . ಜಿಲ್ಲೆಯಾದ್ಯಂತ ಅನೇಕ ದೇವಸ್ಥಾನ .ದೈವಸ್ಥಾನಗಳಿಗೆ ಇರುವ ಸಾಂಪ್ರದಾಯಕ ಶಿಲ್ಪ ಶೈಲಿಯ ಸ್ವಾಗತ ಕಮಾನಿಗೂ,'ಮೆಕ್ಕೆಕಟ್ಟೆ 'ಯಲ್ಲಿರುವ ಕಮಾನಿಗೂ ವಿಬಿನ್ನತೆ ಇದ್ದೂ ,ಬುಡ 4 ಅಡಿ 1 ಇಂಚು ತ್ರಿಕೋಣ ಆಕ್ರುತಿಯಲ್ಲಿದೆ .ಮೇಲೆ ಹೋದಂತೆ ಅದು 12 ಇಂಚು ಅಳತೆಯಲ್ಲಿದೆ .ಎತ್ತರ 40 ಅಡಿ .10 ಅಡಿ ನೆಲದ ಒಳಗಡೆ ಇದ್ದೂ ,ಇದು 'ಟೋಕಿಯೋ ' ನಗರದ ಸ್ವಾಗತ ಕಮಾನು ಮತ್ತು ಅಲ್ಲಿನ ವಿನ್ಯಾಸದ ಬಸ್ ನಿಲುಗಡೆ ತಾಣವಾಗಿದೆ .1990 ಆಚಲಾಡಿ ಭುಜಂಗ ಶೆಟ್ಟಿ ಯವರು ಈ ಸ್ವಾಗತ ಕಮಾನನ್ನು ನಂದಿಕೇಶ್ವರ ದೇವಸ್ಥಾನಕ್ಕೆ ಸೇವಾರೂಪದಲ್ಲಿ ನೀಡಿದ್ದೂ ,ಇದರ ವಿನ್ಯಾಸ ಮತ್ತು ರಚನೆ ಭಾರತದ ತಂತ್ರಾಜ್ನನಿಗಳಿಗೆ ,ವಾಸ್ತು ವಿನ್ಯಾಸಗಾರರಿಗೆ ಸಂಶೋಧನಾತ್ಮ್ಕವಾಗಿದೆ..

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ