ಪುಟ್ಟ ಪರಿಚಯ : ಕುಂದಾಪುರ ದಿಂದ 35 ಕೀ.ಮೀ .ಪೂರ್ವ ದಿಕ್ಕಿಗೆ ,ಸಿದ್ದಾಪುರದಿಂದ 7
ಕೀ .ಮೀ .ದೂರವಿರುವ ಶ್ರೀ ಕ್ಷೇತ್ರ ಕಮಲಶಿಲೆ ಹಚ್ಚ -ಹಸುರಿನ ಪಚ್ಚಿಮ ಘಟ್ಟದ ತಪ್ಪಲಿನ ಮಧ್ಯೆ, ಪ್ರಶಾಂತವಾಗಿ ವರ್ಷವಿಡೀ ಹರಿಯುವ ಕುಬ್ಜಾ ನದಿ ತೀರದಲ್ಲಿನೆಲೆ ನಿಂತಿರುವ ಬ್ರಾಹ್ಮಿ ದುರ್ಗಾ ಪರಮೇಶ್ವರಿಯ ಇತಿಹಾಸ ಅಪಾರ ."ಕ್ರರಾಕ್ಷ " ರಾಕ್ಷಸನ್ನು ವಧಿಸಿ ಬ್ರಾಹ್ಮೀ ಎಂಬ ನಾಮಕಿಂತ ಗೊಂಡು, ಶ್ರೀ ದೇವಿ ಅಪಾರ ವತಾರದಿ0ದ ಭಕ್ತರ ಭಕ್ತರ ಇಷ್ಟಾರ್ತಕನುಗುಣ ವಾಗಿ ಬ್ರಾಹ್ಮಿ ದುರ್ಗಾ ಪರಮೇಶ್ವರಿ ಯಾಗಿ ರೂಪು ಗೊಂಡಿತು . ಶ್ರೀ ದೇವಿಯ ಉದ್ಭವ ಲಿಂಗ (ಮೂರ್ತಿ )ಯು ಕಮಲದ ಶಿಲೆ (ಕಲ್ಲು ) ರೀತಿಯನ್ನು ಹೊಂದಿರುದರಿಂದ ಈ ಪ್ರಾಂತ್ಯವನ್ನು ಕಮಲಶಿಲೆ ಎಂದು ಕರೆಯಲ್ಪಡುತ್ತಿದೆ .ಈ ಸ್ಥಳವು ಹಿಂದೆ ಮಹಾ ತಪಸ್ವಿ ಗಳಾದ "ರೈಕ್ವ" ಮುನಿಗಳ ಆಶ್ರಮವಾಗಿತ್ತು."ಗೌರಿ ಶಕ್ತಿ" ಇಂದ ಕೂಡಿದ ಶ್ರೀ ದುರ್ಗೆಯು ಪ್ರಚಂಡ ರಾಕ್ಷಸರುಗಳಾದ "ಖಾರಸುರ ".ರಟ್ಟಸುರ' ರನ್ನು ಸಂಹಾರ ಮಾಡಿ ಶಿವನಾಜ್ಞೆಯಂತೆ ಇಲ್ಲಿಯೇ ನೆಲೆ ನಿಂತಳು ಎನ್ನವುದು ಸ್ಕಂದ ಪುರಾಣದ ಉಲ್ಲೇಖವಾಗಿದೆ . .ಪ್ರತಿ ದಿನ ಇಲ್ಲಿ ಉಷಾ:ಕಾಲ,ಪ್ರಾತ:ಕಾಲ ,ಮಧ್ಯಾನ ,ಸಂದ್ಯಾಕಾಲ ,ರಾತ್ರಿ ,ಹೀಗೆ ಐದು ಪೂಜೆ ಗಳು ,ತ್ರಿಕಾಲ ಪೂಜೆಗಳು ನಡೆಯತ್ತದೆ .ಶ್ರೀ ಚಂಡಿಕಾಯಾಗ ,ಬೆಳ್ಳಿ ರಥೋತ್ಸವ ,ರಾತ್ರಿ ಮಹಾರಂಗ ಪೂಜೆ ,ಸರ್ವಭಾರಣ ಉತ್ಸವ ,ಪುಷ್ವ ರತೋತ್ಸವ ,ನಡೆಯತ್ತದೆ .ಶ್ರೀ ಕ್ಷೇತ್ರ ದ ವತಿ ಇಂದ ಯಕ್ಷಗಾನ ನಡೆಯುತ್ತಿದ್ದೂ .ಬೆಳಕಿನ ಸೇವೆ ಹರಕೆ ಹೊತ್ತ ಭಕ್ತ ಧಿಗಳು ತಮ್ಮ ಮನೆಗಳಲಿ ನೆರವೇರಿಸುತ್ತಾರೆ .ಭಕ್ತಾಧಿಗಳು ತಮ್ಮ ಮಾನಸಿಕ ,ದೈಹಿಕ, ವಯಕ್ತಿಕ ತೊಂದರೆ ಗಳಿ0ದ ಪಾರಾಗಲು ಶ್ರೀ ಕ್ಷೆತ್ರವನ್ನು ಅವಲಂಬಿಸುದರ ಜೊತೆಗೆ,ಜಾನುವಾರುಗಳಿಗೆ ರೋಗ -ರುಜಿನಿಗಳು ಬಂದಾಗ ಹರಕೆ ರೂಪದಲ್ಲಿ ಗೋವು ಗಳನ್ನೂ ಶ್ರೀ ದೇವಿಯ ಭಂಡಾರಕ್ಕೆ ಬಿಡುತ್ತಾರೆ ,ಇನ್ನು ಬಹಳಷ್ಟು ಹರಕೆ ರೂಪದ ಜಾನುವಾರುಗಳು ಭಕ್ತಾಧಿಗಳ ಮನೆಯಲ್ಲಿದ್ದೂ , ,ಕಾಲ- ಪೂಜಕ್ಕೆ ತಕ್ಕಂತೆ ಹಾಲು -ತುಪ್ಪವನ್ನು ತಂದೊಪ್ಪಿಸುತ್ತಾರೆ . ಸೀರೆ ,ಆಭರಣ ಗಳನ್ನೂ ತಂದೊಪ್ಪಿಸಿ ಶ್ರೀ ದೇವಿ ಯಾ ಕ್ರಪೆಗೆ ಪಾತ್ರರಾಗುತ್ತಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ