ಸುಪಾರ್ಶ್ವ ಗುಹೆ
:ಕಮಲಶಿಲೆ ಇಂದ ಹಳ್ಳಿಹೊಳೆ ಮಾರ್ಗದಲ್ಲಿ 1 .5 ಕೀ .ಮೀ .ದೂರದ ದಟ್ಟ ಕಾನನದ ಮಧ್ಯೆ ದಲ್ಲಿ
ಕಂಡುಬರುತ್ತದೆ .ಕ್ರತ ಯುಗದಲ್ಲಿ ,ಸುಪಾರ್ಶ್ವ ನೆಂಬ ರಾಜನು ರಾಜಕೀಯದಲ್ಲಿ ಜಿಗುಪ್ಸೆ
ಹೊಂದಿ ತಪಸ್ಸಿಗೆ ಯೋಗ್ಯ ಸ್ಥಳವನ್ನು ಹುಡುಕುತ್ತಿರುವ ಸಂದರ್ಭ ,ಶಿವನ ಅಣತೆಯಂತೆ,ಇಲ್ಲಿ
ತಪಸ್ಸನ್ನು ಆಚರಿಸಲು ಸಿದ್ದನಾಗುತ್ತಾನೆ .ಅವನ ತಪಸ್ಸಿಗೆ ಯಾವುದೇ ವಿಘ್ನ
ಸಂಬವಿಸದಂತೆ ಶಿವನು ತನ್ನ ಬೈರನಿಗೆ ಗುಹ ದ್ವಾರದಲ್ಲಿ ನಿಲ್ಲುವಂತೆ ಸೂಚಿಸುತ್ತಾನೆ
.ಸುಪಾರ್ಶ್ವ ನು ಬಹುಕಾಲ ಗುಹೆಯಲ್ಲಿ ತಪಗೈದು ಮೋಕ್ಷ ಹೊಂದುತ್ತಾನೆ .ಇದರಿಂದ
ಸುಪಾರ್ಶ್ವ ಎಂದು ಹೆಸರು ಬಂದಿತು .ಗುಹೆಯ ಒಳಗೆ ವ್ಯಾಘ್ರಗುಹೆ ,ಕಾಳ,ಲಕ್ಷ್ಮಿ
,ಸರಸ್ವತಿ ,ಅಕ್ಕ -ತಂಗಿಯರ ಜೋಡು ಕೆರೆ ,ನಾಗನ ತೀರ್ಥ ,ನಾಗನ ಉದ್ಭವ ಮೂರ್ತಿ ಗಳನ್ನೂ
ಇಂದಿಗೂ ಸಹ ಗೋಚರಿಸುತ್ತವೆ .ರಥೋತ್ಸವದ ಮುನ್ನ ದಿನ ಹುಲಿ ಈ ಗುಹೆಯನ್ನು
ಪ್ರವೇಶಿಸುತ್ತದೆ .ಮತ್ತು ಸುತ್ತ -ಮುತ್ತಲಿನ ಪ್ರದೇಶ ಗಳಿಗೆ ಹೋಗಿ ಘರ್ಜಿಸುತ್ತದೆ ಇದು
ರಥೋತ್ಸವದ ಆಮಂತ್ರ ಣ, ಶ್ರೀ ದೇವಿ ಯು ತನ್ನ ವಾಹನವಾಗಿರುವ ಈ ಹುಲಿ ಯನ್ನು ಕಳುಶಿಸಿ
ಕೊಡುತಾಳೆ ಎನ್ನಲಾಗಿದೆ .ಇವತ್ತಿಗೂ ಸಹ ಹುಲಿಯ ಹೆಜ್ಜೆಯ ಗುರುತನ್ನು ಕುರುಹಾಗಿ
ಗುಹೆಯಲ್ಲಿ ಪತ್ತೆ ಹಚ್ಚಬಹುದು ..
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ