ಗುರುವಾರ, ಏಪ್ರಿಲ್ 19, 2012

ಶ್ರೀ ಕ್ಷೇತ್ರ ಕಮಲಶಿಲೆ














ಪುಟ್ಟ ಪರಿಚಯ : ಕುಂದಾಪುರ ದಿಂದ 35 ಕೀ.ಮೀ .ಪೂರ್ವ ದಿಕ್ಕಿಗೆ ,ಸಿದ್ದಾಪುರದಿಂದ 7 
ಕೀ .ಮೀ .ದೂರವಿರುವ ಶ್ರೀ ಕ್ಷೇತ್ರ ಕಮಲಶಿಲೆ ಹಚ್ಚ -ಹಸುರಿನ ಪಚ್ಚಿಮ ಘಟ್ಟದ ತಪ್ಪಲಿನ ಮಧ್ಯೆ, ಪ್ರಶಾಂತವಾಗಿ ವರ್ಷವಿಡೀ ಹರಿಯುವ ಕುಬ್ಜಾ ನದಿ ತೀರದಲ್ಲಿನೆಲೆ ನಿಂತಿರುವ  ಬ್ರಾಹ್ಮಿ ದುರ್ಗಾ ಪರಮೇಶ್ವರಿಯ ಇತಿಹಾಸ ಅಪಾರ ."ಕ್ರರಾಕ್ಷ " ರಾಕ್ಷಸನ್ನು ವಧಿಸಿ ಬ್ರಾಹ್ಮೀ  ಎಂಬ ನಾಮಕಿಂತ ಗೊಂಡು, ಶ್ರೀ ದೇವಿ ಅಪಾರ ವತಾರದಿ0ದ ಭಕ್ತರ ಭಕ್ತರ ಇಷ್ಟಾರ್ತಕನುಗುಣ ವಾಗಿ  ಬ್ರಾಹ್ಮಿ ದುರ್ಗಾ ಪರಮೇಶ್ವರಿ ಯಾಗಿ ರೂಪು ಗೊಂಡಿತು . ಶ್ರೀ ದೇವಿಯ ಉದ್ಭವ ಲಿಂಗ (ಮೂರ್ತಿ )ಯು  ಕಮಲದ ಶಿಲೆ (ಕಲ್ಲು ) ರೀತಿಯನ್ನು ಹೊಂದಿರುದರಿಂದ ಈ ಪ್ರಾಂತ್ಯವನ್ನು ಕಮಲಶಿಲೆ ಎಂದು ಕರೆಯಲ್ಪಡುತ್ತಿದೆ .ಈ ಸ್ಥಳವು ಹಿಂದೆ ಮಹಾ ತಪಸ್ವಿ ಗಳಾದ "ರೈಕ್ವ" ಮುನಿಗಳ ಆಶ್ರಮವಾಗಿತ್ತು."ಗೌರಿ ಶಕ್ತಿ" ಇಂದ ಕೂಡಿದ ಶ್ರೀ ದುರ್ಗೆಯು ಪ್ರಚಂಡ ರಾಕ್ಷಸರುಗಳಾದ "ಖಾರಸುರ ".ರಟ್ಟಸುರ' ರನ್ನು ಸಂಹಾರ ಮಾಡಿ ಶಿವನಾಜ್ಞೆಯಂತೆ ಇಲ್ಲಿಯೇ ನೆಲೆ ನಿಂತಳು ಎನ್ನವುದು ಸ್ಕಂದ ಪುರಾಣದ ಉಲ್ಲೇಖವಾಗಿದೆ .  .ಪ್ರತಿ ದಿನ ಇಲ್ಲಿ ಉಷಾ:ಕಾಲ,ಪ್ರಾತ:ಕಾಲ ,ಮಧ್ಯಾನ ,ಸಂದ್ಯಾಕಾಲ ,ರಾತ್ರಿ ,ಹೀಗೆ ಐದು ಪೂಜೆ ಗಳು ,ತ್ರಿಕಾಲ ಪೂಜೆಗಳು ನಡೆಯತ್ತದೆ .ಶ್ರೀ ಚಂಡಿಕಾಯಾಗ ,ಬೆಳ್ಳಿ ರಥೋತ್ಸವ ,ರಾತ್ರಿ ಮಹಾರಂಗ ಪೂಜೆ ,ಸರ್ವಭಾರಣ ಉತ್ಸವ ,ಪುಷ್ವ ರತೋತ್ಸವ ,ನಡೆಯತ್ತದೆ .ಶ್ರೀ ಕ್ಷೇತ್ರ ದ ವತಿ ಇಂದ ಯಕ್ಷಗಾನ ನಡೆಯುತ್ತಿದ್ದೂ .ಬೆಳಕಿನ ಸೇವೆ ಹರಕೆ ಹೊತ್ತ ಭಕ್ತ ಧಿಗಳು  ತಮ್ಮ ಮನೆಗಳಲಿ ನೆರವೇರಿಸುತ್ತಾರೆ .ಭಕ್ತಾಧಿಗಳು ತಮ್ಮ ಮಾನಸಿಕ ,ದೈಹಿಕ, ವಯಕ್ತಿಕ  ತೊಂದರೆ ಗಳಿ0ದ ಪಾರಾಗಲು ಶ್ರೀ ಕ್ಷೆತ್ರವನ್ನು ಅವಲಂಬಿಸುದರ ಜೊತೆಗೆ,ಜಾನುವಾರುಗಳಿಗೆ ರೋಗ -ರುಜಿನಿಗಳು ಬಂದಾಗ ಹರಕೆ ರೂಪದಲ್ಲಿ ಗೋವು ಗಳನ್ನೂ ಶ್ರೀ ದೇವಿಯ ಭಂಡಾರಕ್ಕೆ ಬಿಡುತ್ತಾರೆ ,ಇನ್ನು  ಬಹಳಷ್ಟು ಹರಕೆ ರೂಪದ ಜಾನುವಾರುಗಳು ಭಕ್ತಾಧಿಗಳ ಮನೆಯಲ್ಲಿದ್ದೂ ,  ,ಕಾಲ- ಪೂಜಕ್ಕೆ ತಕ್ಕಂತೆ ಹಾಲು -ತುಪ್ಪವನ್ನು ತಂದೊಪ್ಪಿಸುತ್ತಾರೆ . ಸೀರೆ ,ಆಭರಣ ಗಳನ್ನೂ ತಂದೊಪ್ಪಿಸಿ ಶ್ರೀ ದೇವಿ ಯಾ ಕ್ರಪೆಗೆ ಪಾತ್ರರಾಗುತ್ತಾರೆ.

ಸೋಮವಾರ, ಮಾರ್ಚ್ 5, 2012

ಮೆಕ್ಕೆ ಕಟ್ಟೆಯಲ್ಲಿ ಜಪಾನಿನ ವಿಶಿಷ್ಟ ಸ್ವಾಗತ ಕಮಾನು

ಉಡುಪಿ -ಬಾರ್ಕೂರ್-ಶಿವಮೊಗ್ಗ ಕ್ಕೆ ತೆರಳುವ ರಾಜ್ಯ ಹೆದ್ದಾರಿಯ 'ಮೆಕ್ಕೆ ಕಟ್ಟೆ'ಯಲ್ಲಿ ನಂದಿಕೇಶ್ವರ ದೇವಸ್ಥಾನದ ಸ್ವಾಗತ ಕಮಾನು ಮತ್ತು ಅದರ ಸನಿಹವಿರುವ  ಬಸ್ ನಿಲುಗಡೆ ತಾಣ ವಿಶಿಷ್ಟ ರೀತಿಯಲ್ಲಿ ಜನರ ಕಣ್ಮನ ಸೆಳೆಯುತ್ತಿದೆ . ಜಿಲ್ಲೆಯಾದ್ಯಂತ ಅನೇಕ ದೇವಸ್ಥಾನ .ದೈವಸ್ಥಾನಗಳಿಗೆ ಇರುವ ಸಾಂಪ್ರದಾಯಕ ಶಿಲ್ಪ ಶೈಲಿಯ ಸ್ವಾಗತ ಕಮಾನಿಗೂ,'ಮೆಕ್ಕೆಕಟ್ಟೆ 'ಯಲ್ಲಿರುವ ಕಮಾನಿಗೂ ವಿಬಿನ್ನತೆ ಇದ್ದೂ ,ಬುಡ 4 ಅಡಿ 1 ಇಂಚು ತ್ರಿಕೋಣ ಆಕ್ರುತಿಯಲ್ಲಿದೆ .ಮೇಲೆ ಹೋದಂತೆ ಅದು 12 ಇಂಚು ಅಳತೆಯಲ್ಲಿದೆ .ಎತ್ತರ 40 ಅಡಿ .10 ಅಡಿ ನೆಲದ ಒಳಗಡೆ ಇದ್ದೂ ,ಇದು 'ಟೋಕಿಯೋ ' ನಗರದ ಸ್ವಾಗತ ಕಮಾನು ಮತ್ತು ಅಲ್ಲಿನ ವಿನ್ಯಾಸದ ಬಸ್ ನಿಲುಗಡೆ ತಾಣವಾಗಿದೆ .1990 ಆಚಲಾಡಿ ಭುಜಂಗ ಶೆಟ್ಟಿ ಯವರು ಈ ಸ್ವಾಗತ ಕಮಾನನ್ನು ನಂದಿಕೇಶ್ವರ ದೇವಸ್ಥಾನಕ್ಕೆ ಸೇವಾರೂಪದಲ್ಲಿ ನೀಡಿದ್ದೂ ,ಇದರ ವಿನ್ಯಾಸ ಮತ್ತು ರಚನೆ ಭಾರತದ ತಂತ್ರಾಜ್ನನಿಗಳಿಗೆ ,ವಾಸ್ತು ವಿನ್ಯಾಸಗಾರರಿಗೆ ಸಂಶೋಧನಾತ್ಮ್ಕವಾಗಿದೆ..

ಶುಕ್ರವಾರ, ಜನವರಿ 27, 2012

 ತನ್ನ ಜೀವನಾದರ್ಶ ತತ್ವ ಗಳಿಂದ  ವಿಶ್ವಮಾನ್ಯರಾದ ,ಯುವ ಜನತೆಗೆ ಸ್ಪೂರ್ತಿಯ ಸೆಲೆ ಯಾದ ವಿಶ್ವದೆಲ್ಲೆಡೆ ಭಾರತದ ನೆಲೆದ ಸಂಸ್ಕೃತಿ ಕಂಪನ್ನು ಹಬ್ಬಿಸಿದ ಸ್ವಾಮಿ  ವಿವೇಕಾನಂದರ ಹುಟ್ಟಿದ ದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತಿದೆ ..ಈ ವರ್ಷ ಯುವಜನೋತ್ಸವ ಕಡಲ ತಡಿ  ಭಾರ್ಗವನ ನೆಲೆ  ಮಂಗಳೂರಿನಲ್ಲಿ ವಿಜ್ರಮ್ಬಣೆ ಇಂದ 4  ದಿನಗಳ ಕಾಲ ದೇಶದ ಸಾಂಸೃತಿಕ ಲೋಕ ದ ರಸಘಳಿಗೆಗಳು ಅನಾವರಣ ಗೊಂಡಿತು.ರಾಷ್ಟ್ರೀಯ ಯುವ ಜನೋತ್ಸವದ ಮೂಲಕ ದೇಶದ  ನಾನಾ ಬಾಗದ  ಯುವ ಸಮುದಾಯ ವನ್ನು ಒಂದೇ ವೇದಿಕೆ  ತರುದರೊಂದಿಗೆ ಅವರಿಗೆ ವಿವಿಧ ಕಾರ್ಯಕ್ರಮ ಆಯೋಜಿಸಿ ಸ್ಪರ್ಧೆ ಏರ್ಪಡಿಸಲಾಗುತ್ತದೆ . ರಾಷ್ಟ್ರೀಯ ಯುವಜನೋತ್ಸ್ವದ ಆತಿಥ್ಯ ಎನ್ನುದು ಸಣ್ಣ ಗೌರವವಲ್ಲ ಕರ್ನಾಟಕ ರಾಜ್ಯದಲ್ಲೇ ಇನ್ತೊಂದೊಂದು  ಉತ್ಸವ ನಡೆಯುತ್ತಿರುದು  ಇದೆ  ಮೊದಲು. ಇದು ಮಂಗಳೂರಿನ ಭಾಗ್ಯ ಎನ್ನಬಹುದು .ಕಾಶ್ಮೀರ ದಿಂದ ಕನ್ಯಾಕುಮಾರಿ ವರೆಗೆ ,ರಾಜಸ್ಥಾನದಿಂದ ಮಣಿಪುರ ದವರೆಗೆ  ದೇಶದ 35 ರಾಜ್ಯ  ಹಾಗೂ ಕೇಂದ್ರಾಡಳಿತ ಪ್ರದೇಶದ  5000  ಸಾವಿರ  ಮಂದಿ ಸೇರಿದಂತೆ ವಿದೇಶಿ ಪ್ರತಿನಿಧಿ ಗಳು  ಭಾಗವಹಿಸಿದ್ದರು. ಬ್ರಹತ್ತ್ ವಸ್ತು ಪ್ರದರ್ಶನ ,ಎಲ್ಲ ರಾಜ್ಯ ದ ಪಟ್ಟಣದ ಆಹಾರ ವ್ಯವಸ್ಥೆ ಉತ್ಸವದಲ್ಲಿ ಮಿಂಚಿತ್ತು ..








   ಭಾರತದಲ್ಲಿ ಇದುವರೆಗೆ ನಡೆದ ಯುವಜನೋತ್ಸವದ ಒಂದು ಕ್ಷಿಪ್ರ ನೋಟ
1. 1995 ಭೂಪಾಲ್ (ಮಧ್ಯಪ್ರದೇಶ )
2 . 1996 ಕೋಲ್ಕತ್ತಾ (ಪಶ್ಚಿಮಬಂಗಾಳ)
3 . 1997  ಚಂಡೀಗಡ(ಪಂಜಾಬ್ )
4 . 1999  ಹೈದರಾಬಾದ್ (ಆಂಧ್ರಪ್ರದೇಶ್ )
5 . 2000 ಲಕ್ನೋ (ಉತ್ತರ ಪ್ರದೇಶ್ )
6 .2001  ಗಾಂಧಿ ನಗರ್ (ಗುಜರಾತ್ )
                                                      7 .2002 ಹಿಸ್ಸಾರ್ (ಹರಿಯಾಣ )
                                                      8 . 2003 ತಿರುವನಂತಪುರಂ (ಕೇರಳ )
                                                     9 .2004 ವಾರಾಣಸಿ (ಉತ್ತರ ಪ್ರದೇಶ್ )
                                                       10 2005 ಹೈದರಾಬಾದ್ (ಆಂಧ್ರ ಪ್ರದೇಶ್ ) 
  11 2006 ಪಟ್ನ(ಬಿಹಾರ್ )
12 .2007 ಪುಣೆ (ಮಹಾರಾಷ್ಟ್ರ )
13 .2008 ಚೆನ್ನೈ (ತಮಿಳುನಾಡು )
14 .2009 ಅಮೃತ್ ಸರ್ (ಪಂಜಾಬ್ )
15 .2010 ಭುವನೇಶ್ವರ (ಒರಿಸ್ಸಾ )
16 .2011 ಉದಯ ಪುರ (ರಾಜಸ್ಥಾನ )
17 .2012 ಮಂಗಳೂರು (ಕರ್ನಾಟಕ )