ಕುಂದಾಪುರ ; ತಾಲೊಕಿನ ಶಕ್ತಿ ಕ್ಷೇತ್ರಗಳಲ್ಲಿ
ಕಮಲಶಿಲೆ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ಕ್ಶೇತ್ರವೂ ಒಂದು ಕೊಲ್ಲೂರು ಹೊರತು ಪಡಿಸಿದರೆ ಅತೀ
ಹೆಚ್ಚು ಭಕ್ತರನ್ನು ಸೆಳೆಯುವ ಮಲೆನಾಡಿನ ಆದಿ ಮಾಯೆ .ಐತಿಹಾಸಿಕ ಹಾಗೂ ಪೌರಾಣಿಕವಾಗಿಯೂ ವಿಷೇಶವಾಗಿ
ಮಹತ್ವ ಹೊಂದಿರುವ ಕ್ಶೆತ್ರದಲ್ಲಿ ವರ್ಶಂಪ್ರತಿಯಂತೆ ನಡೆಯುವ ಮಹನ್ಮಹಾರಥೋತ್ಸವ ,ಹಾಗೂ ಧಾರ್ಮಿಕ ಉತ್ಸವ
ಎ.೨೭ ಶನಿವಾರದಿಂದ ಮೆ ೨ ಗುರುವಾರದವರೆಗೆ ವಿಧಿ -ವಿಧಾನದಂತೆ ಸಂಭ್ರಮ ಮತ್ತು ಸಡಗರದಿಂದ ನಡೆಯಿತು
. ಸಹಸ್ರಾರು ಭಗವತ್ ಭಕ್ತರು ತಮ್ಮ ಬಂಧು – ಬಳಗದೊಂದಿಗೆ ಆಗಮಿಸಿ ಶ್ರೀ ದೇವರ ಕ್ರಪೆಗೆ ಪಾತ್ರರಾದರು.
ಎ.೨೮ ಭಾನುವಾರ ಸಿಂಹವಾಹನೋತ್ಸವ, ಎ.೨೯ ಸೊಮವಾರ ಪುಷ್ಪಕ ವಾಹನೊತ್ಸವ, ಎ.೩೦ ಮಂಗಳವಾರ ಮನ್ಮಾಹರಥೋತ್ಸವ,
ಮೆ.೧ ಬುಧವಾರ ಚುರ್ಣೋತ್ಸವ, ಮೆ.೨ ಗುರುವಾರ ಪ್ರಾತ: ಅವಭ್ರತ, ಮ್ರಗಯಾ ವಿಹಾರ, ಪೂರ್ನಾಹುತಿ, ದ್ವಜಾರೋಹಣ,
ಕುಂಬಾಭಿಷೇಕ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ದೇವಳದ ಆಡಳಿತ ಧರ್ಮದರ್ಶಿ ಶೆಟ್ಟಿಪಾಲು ಸಚ್ಚಿದಾನಂದ
ಚಾತ್ರ ,ಜೊತೆ ಆಡಳಿತ ಧರ್ಮದರ್ಶಿಗಳಾದ ಬರೆಗುಂಡಿ ಶ್ರೀನಿವಾಸ ಚಾತ್ರ ಹಾಗೂ ಆಜ್ರಿ ಚಂದ್ರಶೇಖರ್ ಶೆಟ್ಟಿಯವರ
ನೇತ್ರತ್ವದಲ್ಲಿ ನೇರವೆರಿದವು. ಕುಂದಾಪುರ ದಿಂದ 35 ಕೀ.ಮೀ .ಪೂರ್ವ ದಿಕ್ಕಿಗೆ ,ಸಿದ್ದಾಪುರದಿಂದ
7 ಕೀ .ಮೀ .ದೂರವಿರುವ ಶ್ರೀ ಕ್ಷೇತ್ರ ಕಮಲಶಿಲೆ ಹಚ್ಚ -ಹಸುರಿನ ಪಚ್ಚಿಮ ಘಟ್ಟದ ತಪ್ಪಲಿನ
ಮಧ್ಯೆ, ಪ್ರಶಾಂತವಾಗಿ ವರ್ಷವಿಡೀ ಹರಿಯುವ ಕುಬ್ಜಾ ನದಿ ತೀರದಲ್ಲಿನೆಲೆ ನಿಂತಿರುವ ಬ್ರಾಹ್ಮಿ
ದುರ್ಗಾ ಪರಮೇಶ್ವರಿಯ ಇತಿಹಾಸ ಅಪಾರ .”ಕ್ರರಾಕ್ಷ ” ರಾಕ್ಷಸನ್ನು ವಧಿಸಿ ಬ್ರಾಹ್ಮೀ ಎಂಬ ನಾಮಕಿಂತ
ಗೊಂಡು, ಶ್ರೀ ದೇವಿ ಅಪಾರ ವತಾರದಿ0ದ ಭಕ್ತರ ಭಕ್ತರ ಇಷ್ಟಾರ್ತಕನುಗುಣ ವಾಗಿ ಬ್ರಾಹ್ಮಿ ದುರ್ಗಾ
ಪರಮೇಶ್ವರಿ ಯಾಗಿ ರೂಪು ಗೊಂಡಿತು . ಶ್ರೀ ದೇವಿಯ ಉದ್ಭವ ಲಿಂಗ (ಮೂರ್ತಿ )ಯು ಕಮಲದ ಶಿಲೆ
(ಕಲ್ಲು ) ರೀತಿಯನ್ನು ಹೊಂದಿರುದರಿಂದ ಈ ಪ್ರಾಂತ್ಯವನ್ನು ಕಮಲಶಿಲೆ ಎಂದು ಕರೆಯಲ್ಪಡುತ್ತಿದೆ .ಈ
ಸ್ಥಳವು ಹಿಂದೆ ಮಹಾ ತಪಸ್ವಿ ಗಳಾದ “ರೈಕ್ವ” ಮುನಿಗಳ ಆಶ್ರಮವಾಗಿತ್ತು.”ಗೌರಿ ಶಕ್ತಿ” ಇಂದ ಕೂಡಿದ
ಶ್ರೀ ದುರ್ಗೆಯು ಪ್ರಚಂಡ ರಾಕ್ಷಸರುಗಳಾದ “ಖಾರಸುರ “.ರಟ್ಟಸುರ’ ರನ್ನು ಸಂಹಾರ ಮಾಡಿ ಶಿವನಾಜ್ಞೆಯಂತೆ
ಇಲ್ಲಿಯೇ ನೆಲೆ ನಿಂತಳು ಎನ್ನವುದು ಸ್ಕಂದ ಪುರಾಣದ ಉಲ್ಲೇಖವಾಗಿದೆ . .ಪ್ರತಿ ದಿನ ಇಲ್ಲಿ
ಉಷಾ:ಕಾಲ,ಪ್ರಾತ:ಕಾಲ ,ಮಧ್ಯಾನ ,ಸಂದ್ಯಾಕಾಲ ,ರಾತ್ರಿ ,ಹೀಗೆ ಐದು ಪೂಜೆ ಗಳು ,ತ್ರಿಕಾಲ ಪೂಜೆಗಳು
ನಡೆಯತ್ತದೆ .ಶ್ರೀ ಚಂಡಿಕಾಯಾಗ ,ಬೆಳ್ಳಿ ರಥೋತ್ಸವ ,ರಾತ್ರಿ ಮಹಾರಂಗ ಪೂಜೆ ,ಸರ್ವಭಾರಣ ಉತ್ಸವ ,ಪುಷ್ವ
ರತೋತ್ಸವ ,ನಡೆಯತ್ತದೆ .ಶ್ರೀ ಕ್ಷೇತ್ರ ದ ವತಿ ಇಂದ ಯಕ್ಷಗಾನ ನಡೆಯುತ್ತಿದ್ದೂ .ಬೆಳಕಿನ ಸೇವೆ ಹರಕೆ
ಹೊತ್ತ ಭಕ್ತ ಧಿಗಳು ತಮ್ಮ ಮನೆಗಳಲಿ ನೆರವೇರಿಸುತ್ತಾರೆ .ಭಕ್ತಾಧಿಗಳು ತಮ್ಮ ಮಾನಸಿಕ ,ದೈಹಿಕ,
ವಯಕ್ತಿಕ ತೊಂದರೆ ಗಳಿ0ದ ಪಾರಾಗಲು ಶ್ರೀ ಕ್ಷೆತ್ರವನ್ನು ಅವಲಂಬಿಸುದರ ಜೊತೆಗೆ,ಜಾನುವಾರುಗಳಿಗೆ
ರೋಗ -ರುಜಿನಿಗಳು ಬಂದಾಗ ಹರಕೆ ರೂಪದಲ್ಲಿ ಗೋವು ಗಳನ್ನೂ ಶ್ರೀ ದೇವಿಯ ಭಂಡಾರಕ್ಕೆ ಬಿಡುತ್ತಾರೆ
,ಇನ್ನು ಬಹಳಷ್ಟು ಹರಕೆ ರೂಪದ ಜಾನುವಾರುಗಳು ಭಕ್ತಾಧಿಗಳ ಮನೆಯಲ್ಲಿದ್ದೂ , ,ಕಾಲ-
ಪೂಜಕ್ಕೆ ತಕ್ಕಂತೆ ಹಾಲು -ತುಪ್ಪವನ್ನು ತಂದೊಪ್ಪಿಸುತ್ತಾರೆ . ಸೀರೆ ,ಆಭರಣ ಗಳನ್ನೂ ತಂದೊಪ್ಪಿಸಿ
ಶ್ರೀ ದೇವಿಯ ಕ್ರಪೆಗೆ ಪಾತ್ರರಾಗುತ್ತಾರೆ.
ಕ್ಶೇತ್ರದ ಪರಿಚಯ : ಕಮಲಶಿಲೆ ಕ್ಷೇತ್ರದ ಮಹಿಮೆ ಸ್ಕಂದ ಪುರಾಣದ ಪ್ರಕಾರ
ಸಹ್ಯಾದ್ರಿ ಖಂಡದ ೨೬ ರಿಂದ ೨೯ ನೇ ಅಧ್ಯಾಯದ ತನಕ ವರ್ಣಿಸಲ್ಪಟ್ಟಿದೆ. ಕೈಲಾಸ ಪರ್ವತದಲ್ಲಿ ಮಹೇಶ್ವರನು
ಸತಿ ಪಾರ್ವತಿ ಯೊಂದಿಗೆ ನವರತ್ನ ಖಚಿತ ಪೀಠದಲ್ಲಿ ಆಸೀನನಾಗಿದ್ದ ಪ್ರತಿನಿತ್ಯ ಸಂದ್ಯಾಕಾಲದಲ್ಲಿ ಪದ್ದತಿಯಂತೆ
ನಾಟ್ಯಕೋವಿದೆ ಪಿಂಗಳಾ ಎಂಬ ವೈಶ್ಯೆಯಿಂದ ನರ್ತನ ಸೇವೆ ನಡೆಯುತಿತ್ತು ,ಇದರಿಂದ ಶಿವ -ಪಾರ್ವತಿಯರು
ಸಂತೋಷ ಪಡುತ್ತಿದ್ದರು. ಒಂದು ದಿನ ಪಿಂಗಳೆಯು ತನ್ನ ದೇಹ ಸೌ ಂದರ್ಯದಿಂದ ಗರ್ವಿತಳಾಗಿ ,ರೂಪ ಮದದಿಂದ
ನಾಟ್ಯಮಾಡುವುದಿಲ್ಲ .ಆಗ ಕ್ರೊಧ ಗೊಂಡ ಪಾರ್ವತಿಯು ಪಿಂಗಳೆಗೆ ಶಾಪ ವನ್ನಿತ್ತು , ಸರ್ವ ಲೋಕವು ಅಸಹ್ಯ
ಪಡುವ ಂತಹ ಅಂಕು ಡೊಂಕಿನ ಗೂನು ಬೆನ್ನಿನ ಕುಬ್ಜೆಯಾಗು ಎಂದು ಶಾಪ ಗೈಯುತ್ತಾಳೆ. ಶಾಪ ಗ್ರಸ್ತಳಾದ
ಪಿಂಗಳೆಯು ತಕ್ಶಣ ಸುಂದರವಾದ ದೇಹವು ಬಿಡಲ್ಪಟ್ಟು ಕುಬ್ಜೆ್ಯಾಗುತ್ತಾಳೆ ತನ್ನ ತಪ್ಪಿನ ಅರಿವಾಗಿ ದೇವಿಯನ್ನು
ಪರಿ-ಪರಿಯಾಗಿ ಶಾಪ ವಿಮೋಚನೆಗಾಗಿ ಬೇಡುತ್ತಾಳೆ ಕುಬ್ಜೆಯ ಮೊರಗೆ ಪ್ರಸನ್ನಳಾದ ಪಾರ್ವತಿಯು ನಾನು ಭೂ
ಲೋಕದಲ್ಲಿ ಕಂಟಕ ಪ್ರಾಯರಾಗಿರುವ ಖರ- ರಟ್ಟಾಸುರರ ಸಂಹಾರಕ್ಕಾಗಿ ಹೋಗುತ್ತೇನೆ . ಅಲ್ಲಿ ಸಹ್ಯ ಪರ್ವತ್ದ
ಬಳಿ ಇರುವ ಮನೋಹರವಾದ ರಖ್ಯಮಹಾ ಮುನಿಗಳ ಆಶ್ರಮದ ಮುಂಭಾಗದಲ್ಲಿ ಬರುವ ಶ್ರಾವಣ ಮಾಸದ ಕ್ರಷ್ಣ
ನವಮಿಯ ಶುಕ್ರವಾರದಂದು ಪಾತಾಳದಿಂದ ಲಿಂಗ ರೂಪಿಯಾಗಿ ಅವತರಿಸುತ್ತೇನೆ ಸದಾ ಶಿವನ ಆಜ್ನೆಯಂತೆ
ಆ ಪುಣ್ಯತ್ತಮ ಮತ್ತು ಪವಿತ್ರವಾದ ಸ್ಥಳದಲ್ಲಿ ಕಮಲಶಿಲಾ ರೂಪದ ಲಿಂಗೆಯಾಗಿ ಅವಿರ್ಬವಿಸಿ ಭಕ್ತರ ಭಕ್ತಿಗೆ
ಮೆಚ್ಚಿ ಭಕ್ತಾಭೀಷ್ಟ ಪ್ರದಾಯಿಣಿಯಾಗುತ್ತೇನೆ ಮುಂದೆ ಈ ಕ್ಶೇತ್ರವು ಕಮಲಶಿಲೆ ಎಂದು ಖ್ಯಾತಿ ಹೊಂದುತ್ತದೆ
, ನೀನು ಭೂ ಲೊಕಕ್ಕೆ ಹೋಗಿ ರುಕ್ವಶ್ರಮದ ಬಳಿಯಲ್ಲಿರುವ ಸುಪರ್ಶ್ವಗುಹೆ ಯಿಂದ ಹೊರಡುವ ನಾಗ ತೀರ್ಥದ
ಸಮೀಪ ಆಶ್ರಮ ರಚಿಸಿ ಕೊಂಡು ನನ್ನ ಅನುಗ್ರಹಕ್ಕಾಗಿ ತಪ್ಪಸನ್ನು ಮಾಡು ನಿನ್ನ ತಪಸ್ಸಿಗೆ ಮೆಚ್ಚಿ ಮುಂದೆ
ನಾನು ಶಾಪಕ್ಕೆ ಮೊಕ್ಶವನ್ನು ಕರುಣಿಸುತ್ತೇನೆ ಎಂದು ಅಪ್ಪಣೆಯನ್ನು ಕೊಡುತ್ತಾಳೆ . ಸಹ್ಯ ಪರ್ವತದಲ್ಲಿ
ಹುಟ್ಟಿ ಪಶ್ಚಿಮಕ್ಕೆ ಸೇರುವ ಕುಬ್ಜಾನದಿ ಕೈಲಾಸದ ನ್ರತ್ಯಗಾತಿ ಪಿಂಗಳೆಯ ಪ್ರತಿರೂಪ ಶಾಪ ವಿಮುಕ್ತಿಗೊಂಡು
ಕುಬ್ಜೆ ಭಗವಾನ್ ಶ್ರಿ ಕ್ರಷ್ಣನ ಅಭಯಕ್ಕೂ ಪಾತ್ರಳಾಗುತ್ತಾಳೆ . ಇಂದಿಗೂ ಕುಬ್ಜೆ ನದಿ ಜೀವ ನದಿ ಯಾಗಿ
ಹರಿಯುತ್ತಿದ್ದೂ ,ಪ್ರತಿ ವರ್ಷಕ್ಕೆ ಒಮ್ಮೆ ಉಕ್ಕಿ ಹರಿದು ಹೆಬ್ಬಾಗಿಲಿಂದ ಒಳ ಪ್ರವೇಶಿಸಿ
ಬ್ರಾಹ್ಮಿ ದುರ್ಗೆಯನ್ನು ತೊಯ್ಯಿಸುವ ವಿದ್ಯಾಮಾನ ಇಂದಿಗೂ ನಡೆದು ಕೊಂಡು ಬಂದಿದೆ.
ಸುಪಾರ್ಶ್ವ ಗುಹೆ :ಕಮಲಶಿಲೆ ಇಂದ ಹಳ್ಳಿಹೊಳೆ ಮಾರ್ಗದಲ್ಲಿ 1 .5 ಕೀ .ಮೀ .ದೂರದ ದಟ್ಟ ಕಾನನದ ಮಧ್ಯೆ ದಲ್ಲಿ ಕಂಡುಬರುತ್ತದೆ .ಕ್ರತ ಯುಗದಲ್ಲಿ ,ಸುಪಾರ್ಶ್ವ ನೆಂಬ ರಾಜನು ರಾಜಕೀಯದಲ್ಲಿ ಜಿಗುಪ್ಸೆ ಹೊಂದಿ ತಪಸ್ಸಿಗೆ ಯೋಗ್ಯ ಸ್ಥಳವನ್ನು ಹುಡುಕುತ್ತಿರುವ ಸಂದರ್ಭ ,ಶಿವನ ಅಣತೆಯಂತೆ,ಇಲ್ಲಿ ತಪಸ್ಸನ್ನು ಆಚರಿಸಲು ಸಿದ್ದನಾಗುತ್ತಾನೆ .ಅವನ ತಪಸ್ಸಿಗೆ ಯಾವುದೇ ವಿಘ್ನ ಸಂಬವಿಸದಂತೆ ಶಿವನು ತನ್ನ ಬೈರನಿಗೆ ಗುಹ ದ್ವಾರದಲ್ಲಿ ನಿಲ್ಲುವಂತೆ ಸೂಚಿಸುತ್ತಾನೆ .ಸುಪಾರ್ಶ್ವ ನು ಬಹುಕಾಲ ಗುಹೆಯಲ್ಲಿ ತಪಗೈದು ಮೋಕ್ಷ ಹೊಂದುತ್ತಾನೆ .ಇದರಿಂದ ಸುಪಾರ್ಶ್ವ ಎಂದು ಹೆಸರು ಬಂದಿತು .ಗುಹೆಯ ಒಳಗೆ ವ್ಯಾಘ್ರಗುಹೆ ,ಕಾಳ,ಲಕ್ಷ್ಮಿ ,ಸರಸ್ವತಿ ,ಅಕ್ಕ -ತಂಗಿಯರ ಜೋಡು ಕೆರೆ ,ನಾಗನ ತೀರ್ಥ ,ನಾಗನ ಉದ್ಭವ ಮೂರ್ತಿ ಗಳನ್ನೂ ಇಂದಿಗೂ ಸಹ ಗೋಚರಿಸುತ್ತವೆ .ರಥೋತ್ಸವದ ಮುನ್ನ ದಿನ ಹುಲಿ ಈ ಗುಹೆಯನ್ನು ಪ್ರವೇಶಿಸುತ್ತದೆ .ಮತ್ತು ಸುತ್ತ -ಮುತ್ತಲಿನ ಪ್ರದೇಶ ಗಳಿಗೆ ಹೋಗಿ ಘರ್ಜಿಸುತ್ತದೆ ಇದು ರಥೋತ್ಸವದ ಆಮಂತ್ರ ಣ, ಶ್ರೀದೇವಿಯು ತನ್ನ ವಾಹನವಾಗಿರುವ ಈ ಹುಲಿಯನ್ನು ಕಳುಹಿಸಿ ಕೊಡುತಾಳೆ ಎನ್ನ ಲಾಗುತ್ತಿದೆ .ಇವತ್ತಿಗೂ ಸಹ ಹುಲಿಯ ಹೆಜ್ಜೆಯ ಗುರುತನ್ನು ಕುರುಹಾಗಿ ಗುಹೆಯಲ್ಲಿ ಪತ್ತೆ ಹಚ್ಚಬಹುದು .

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ